Revelation of John 19

1ಇದಾದ ಮೇಲೆ
19:1 ಪ್ರಕ. 11:15:
ಪರಲೋಕದಲ್ಲಿ ದೊಡ್ಡ ಗುಂಪಿನ ಮಹಾ ಶಬ್ದವೋ ಎಂಬಂತೆ ಒಂದು ಧ್ವನಿಯನ್ನು ಕೇಳಿದೆನು. ಅವರು, <<
19:1 ಅಂದರೆ. ಕರ್ತನನ್ನು ಸ್ತುತಿಸಿರಿ; ಕೀರ್ತ. 105:45; 106:1:
ಹಲ್ಲೆಲೂಯಾ.
19:1 ಅಥವಾ, ರಕ್ಷಣೆಯೂ.
ರಕ್ಷಣೆಯೂ,
19:1 ಪ್ರಕ. 4:11; 7:10; 12:10:
ಮಹಿಮೆಯೂ, ಶಕ್ತಿಯೂ ನಮ್ಮ ದೇವರಿಗೆ ಸೇರಿದ್ದಾಗಿವೆ.
2
19:2 ಪ್ರಕ. 15:3; 16:7:
ಆತನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ, ತನ್ನ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ
19:2 ಪ್ರಕ. 17:1:
ಆ ಮಹಾ ಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಅವಳು ಆತನ ಸೇವಕರನ್ನು ಕೊಂದದ್ದಕ್ಕಾಗಿ
19:2 ಧರ್ಮೋ. 32:43; 2 ಅರಸು. 9:7; ಪ್ರಕ. 6:10; 16:6:
ಅವಳಿಗೆ ಪ್ರತಿದಂಡನೆಯನ್ನು ಮಾಡಿದ್ದಾನೆ.>> ಎಂದು ಹೇಳಿ,

3ಎರಡನೆಯ ಸಾರಿ, <<ಹಲ್ಲೆಲೂಯಾ ಎಂದು ಆರ್ಭಟಿಸಿ,
19:3 ಯೆಶಾ. 34:10; ಪ್ರಕ. 18:9, 18; ಪ್ರಕ. 14:11:
ಅವಳ ದಹನದಿಂದುಂಟಾದ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿಹೋಗುತ್ತಿರುತ್ತದೆ>> ಎಂದು ಹೇಳಿದರು.
4ಆಗ
19:4 ಪ್ರಕ. 4:4, 6, 10; 5:14:
ಇಪ್ಪತ್ನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ ಅಡ್ಡಬಿದ್ದು ಸಿಂಹಾಸನದ ಮೇಲೆ ಕುಳಿತಿರುವ ದೇವರಿಗೆ ಆರಾಧನೆ ಮಾಡಿ,
19:4 ಅಂದರೆ, ತಥಾಸ್ತು, ಹಾಗೆಯೇ ಆಗಲಿ.
<<ಆಮೆನ್, ಹಲ್ಲೆಲೂಯಾ>> ಎಂದರು.

ಕುರಿಮರಿಯ ವಿವಾಹದ ಔತಣ

5ಆ ಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಧ್ವನಿಯು, <<ದೇವರ ಸೇವಕರೆಲ್ಲರೂ, ದೇವರಿಗೆ ಭಯಪಡುವ ಶ್ರೇಷ್ಠರು ಮತ್ತು ಕನಿಷ್ಠರು
19:5 ಕೀರ್ತ. 22:23; 113:1; 134:1; 135:1:
ನಮ್ಮ ದೇವರನ್ನು ಕೊಂಡಾಡಿರಿ>> ಎಂದು ಹೇಳಿತು.

6ತರುವಾಯ
19:6 ವ. 1; ದಾನಿ. 10:6:
ಬಹುದೊಡ್ಡ ಜನರ ಸಮೂಹದ ಶಬ್ದವು
19:6 ಪ್ರಕ. 1:15:
ಜಲಪ್ರವಾಹದ ಘೋಷದಂತೆಯೂ
19:6 ಪ್ರಕ. 6:1; 14:2;
ಭಯಂಕರವಾದ ಗುಡುಗಿನ ಶಬ್ದದಂತೆಯೂ ಇದ್ದ ಒಂದು ಸ್ವರವನ್ನು ಕೇಳಿದೆನು. ಅದು, <<ಹಲ್ಲೆಲೂಯಾ, ಸರ್ವಶಕ್ತನಾಗಿರುವ ನಮ್ಮ ದೇವರಾದ ಕರ್ತನು
19:6 ಕೀರ್ತ. 97:1; ಪ್ರಕ. 11:15, 17:
ಆಳುತ್ತಾನೆ.

7
19:7 ಮತ್ತಾ 22:2; 25:10; ಲೂಕ. 12:36; 14:8; ಎಫೆ. 5:22-32:
ಯಜ್ಞದ ಕುರಿಮರಿಯಾದಾತನ ವಿವಾಹಕಾಲವು ಬಂದಿತೆಂದು ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ, ಏಕೆಂದರೆ ಆತನನ್ನು ವಿವಾಹವಾಗುವ ಕನ್ಯೆಯು
19:7 ಪ್ರಕ. 21:2, 9; ಯೆಶಾ. 54:5, 6; ಹೋಶೇ. 2:19, 20:
ತನ್ನನ್ನು ತಾನೇ ಸಿದ್ದಮಾಡಿಕೊಂಡಿದ್ದಾಳೆ>> ಎಂದು ಹೇಳಿತು.
8
19:8 ಕೀರ್ತ. 45:13-15; ಯೆಹೆ. 16:10:
ಪ್ರಕಾಶಮಾನವೂ, ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವುದಕ್ಕೆ ಆಕೆಗೆ ಕೃಪೆ ಲಭಿಸಿತು. (ಆ
19:8 ಕೀರ್ತ. 132:9; ಯೆಶಾ. 61:10:
ನಾರುಮಡಿ ಅಂದರೆ ದೇವಜನರ ನೀತಿಕೃತ್ಯಗಳೇ).

9ಇದಲ್ಲದೆ ಅವನು ನನ್ನ ಸಂಗಡ ಮಾತನಾಡುತ್ತಾ,
19:9 ವ. 7; ಲೂಕ. 14:15:
<<ಯಜ್ಞದ ಕುರಿಮರಿಯಾದಾತನ ವಿವಾಹದ ಔತಣಕ್ಕೆ ಆಹ್ವಾನಿಸಲ್ಪಟ್ಟವರು ಧನ್ಯರು ಎಂಬುದಾಗಿ ಬರೆ>> ಎಂದು ನನಗೆ ಹೇಳಿ,
19:9 ಪ್ರಕ. 21:5; 22:6:
<<ಈ ಮಾತುಗಳು ದೇವರ ಸತ್ಯವಚನಗಳಾಗಿವೆ>> ಅಂದನು.

10ಆಗ
19:10 ಪ್ರಕ. 22:8:
ನಾನು ಅವನಿಗೆ ಆರಾಧನೆ ಮಾಡಬೇಕೆಂದು ಅವನ ಪಾದಗಳ ಮೇಲೆ ಬೀಳಲು
19:10 ಪ್ರಕ. 22:9; ಅ. ಕೃ. 10:26; 14:15:
ಅವನು, <<ಹೀಗೆ ಮಾಡಬೇಡ ನೋಡು, ನಾನು ನಿನಗೂ,
19:10 ಪ್ರಕ. 1:2; 6:9; 12:17:
ಯೇಸುವಿನ ಬಗ್ಗೆ ಸಾಕ್ಷಿಯನ್ನು ಹೇಳಿರುವ ನಿನ್ನ ಸಹೋದರರಿಗೂ ಸೇವೆಯನ್ನು ಮಾಡುವ ದಾಸನಾಗಿದ್ದೇನೆ, ದೇವರಿಗೆ
19:10 ಅಥವಾ, ನಮಸ್ಕಾರಮಾಡು; ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿಸುವ ಆತ್ಮನು ಪ್ರವಾದನೆಯನ್ನು ಹೇಳಿಸುವ ಆತ್ಮನೇ ಅಂದನು.
ಆರಾಧನೆ ಮಾಡು, ಯೇಸುವಿನ ಸಾಕ್ಷಿಯು ಪ್ರವಾದನೆಯ ಆತ್ಮವೇ>> ಎಂದು ಹೇಳಿದನು.

11
19:11 ಯೆಹೆ. 1:1:
ಪರಲೋಕವು ತೆರೆದಿರುವುದನ್ನು ನಾನು ಕಂಡೆನು. ಆಗ ಇಗೋ,
19:11 ಪ್ರಕ. 6:2:
ಬಿಳೀ ಕುದುರೆಯು ನನಗೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನಿಗೆ
19:11 ಪ್ರಕ. 3:7, 14
ನಂಬಿಗಸ್ತನು, ಸತ್ಯವಂತನು ಎಂದು ಹೆಸರು.
19:11 ಕೀರ್ತ. 96:13; ಯೆಶಾ. 11:4:
ಆತನು ನೀತಿಯಿಂದ ನ್ಯಾಯವಿಚಾರಿಸುತ್ತಾನೆ, ನೀತಿಯಿಂದ ಯುದ್ಧಮಾಡುತ್ತಾನೆ.
12
19:12 ಪ್ರಕ. 1:14; 2:18:
ಆತನ ಕಣ್ಣುಗಳು ಬೆಂಕಿಯ ಜ್ವಾಲೆಯಂತಿವೆ, ಆತನ ತಲೆಯ ಮೇಲೆ
19:12 ಪ್ರಕ. 12:3:
ಅನೇಕ ಕಿರೀಟಗಳುಂಟು,
19:12 ವ. 16:
ಆತನಿಗೆ ಒಂದು ಹೆಸರು ಬರೆದುಕೊಡಲ್ಪಟ್ಟಿದೆ,
19:12 ಪ್ರಕ. 2:17:
ಅದು ಆತನಿಗೇ ಹೊರತು ಮತ್ತಾರಿಗೂ ತಿಳಿಯದು.
13ಆತನು
19:13 ಯೆಶಾ. 63:2,3.
ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿಕೊಂಡಿದ್ದನು.
19:13 ಯೋಹಾ. 1:1-18:
ಆತನಿಗೆ ದೇವರ ವಾಕ್ಯವೆಂದು ಹೆಸರು.

14ಪರಲೋಕದಲ್ಲಿರುವ ಸೈನ್ಯವು
19:14 ಪ್ರಕ. 3:4; 7:9:
ಶುಭ್ರವಾಗಿಯೂ ನಿರ್ಮಲವಾಗಿಯೂ ಇರುವ ನಯವಾದ ನಾರುಮಡಿಯನ್ನು ಧರಿಸಿಕೊಂಡು ಬಿಳೀ ಕುದುರೆಗಳ ಮೇಲೆ ಹತ್ತಿದವರಾಗಿ ಆತನನ್ನು ಹಿಂಬಾಲಿಸಿದರು.
15
19:15 ಯೆಶಾ. 11:4; 2 ಥೆಸ. 2:8; ಇಬ್ರಿ. 4:12:
ಜನಾಂಗಗಳನ್ನು ಕತ್ತರಿಸಿಹಾಕುವುದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಟು ಬರುತ್ತದೆ.
19:15 ಕೀರ್ತ. 2:9; ಪ್ರಕ. 2:27; 12:5:
ಆತನು ಅವರನ್ನು ಕಬ್ಬಿಣದ ದಂಡದಿಂದ ಆಳುವನು.
19:15 ಯೆಶಾ. 63:3; ಪ್ರಕ. 14:20:
ಅವನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷಿಯ ಆಲೆಯಲ್ಲಿ ಇರುವವರನ್ನು ತುಳಿದುಹಾಕುವನು.
16ಆತನ ವಸ್ತ್ರದ ಮೇಲೂ, ತೊಡೆಯ ಮೇಲೂ <<
19:16 ಪ್ರಕ. 17:14:
ರಾಜಾಧಿರಾಜನೂ ಕರ್ತಾಧಿ ಕರ್ತನೂ>> ಎಂಬ
19:16 ವ. 12:
ಹೆಸರು ಬರೆದಿದೆ.

17ಆ ಮೇಲೆ ಒಬ್ಬ ದೇವದೂತನು ಸೂರ್ಯನಲ್ಲಿ ನಿಂತಿರುವುದನ್ನು ಕಂಡೆನು. ಅವನು ಮಹಾ ಸ್ವರದಿಂದ ಕೂಗುತ್ತಾ
19:17 ವ. 21:
ಆಕಾಶದಲ್ಲಿ ಹಾರಾಡುವ ಎಲ್ಲಾ ಪಕ್ಷಿಗಳಿಗೆ, <<ಬನ್ನಿರಿ,
19:17 ಯೆಶಾ. 34:6; ಯೆರೆ. 12:9; 46:10; ಯೆಹೆ. 39:17-20:
ದೇವರು ಮಾಡಿಸುವ ಮಹಾ ಔತಣಕ್ಕೆ ಸೇರಿ ಬನ್ನಿರಿ,
18ರಾಜರ ಮಾಂಸವನ್ನೂ, ಸಹಸ್ರಾಧಿಪತಿಗಳ ಮಾಂಸವನ್ನೂ, ಪರಾಕ್ರಮಶಾಲಿಗಳ ಮಾಂಸವನ್ನೂ, ಕುದುರೆಗಳ ಮಾಂಸವನ್ನೂ, ಕುದುರೆ ಸವಾರರ ಮಾಂಸವನ್ನೂ, ಸ್ವತಂತ್ರರೂ, ದಾಸರೂ, ಶ್ರೇಷ್ಠರು ಮತ್ತು ಕನಿಷ್ಠರು ಇವರೆಲ್ಲರ ಮಾಂಸವನ್ನೂ ತಿನ್ನುವುದಕ್ಕೆ ಬನ್ನಿರಿ>> ಎಂದು ಹೇಳಿದನು.

19ತರುವಾಯ
19:19 ಪ್ರಕ. 11:7; 13:1:
ಆ ಮೃಗವೂ, ಭೂರಾಜರೂ, ಅವರ ಸೈನ್ಯಗಳವರೂ ಆ ಕುದುರೆಯ ಮೇಲೆ ಕುಳಿತಿದ್ದವನ ಮೇಲೆಯೂ ಆತನ ಸೈನ್ಯದ ಮೇಲೆಯೂ
19:19 ಪ್ರಕ. 16:14, 16:
ಯುದ್ಧಮಾಡುವುದಕ್ಕಾಗಿ ಕೂಡಿಬಂದಿರುವುದನ್ನು ಕಂಡೆನು.
20ಆಗ ಆ ಮೃಗವನ್ನು ಸೆರೆಹಿಡಿಯಲಾಯಿತು. ಇದಲ್ಲದೆ
19:20 ಪ್ರಕ. 13:11-17; 16:13:
ಮೃಗದ ಪರವಾಗಿ ಮಹತ್ಕಾರ್ಯಗಳನ್ನು ಮಾಡಿ, ಮೃಗದ ಗುರುತು ಹಾಕಿಸಿಕೊಂಡವರನ್ನೂ
19:20 ಪ್ರಕ. 13:15:
ಅದರ ವಿಗ್ರಹಕ್ಕೆ ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳುಪ್ರವಾದಿಯೂ ಅದರೊಂದಿಗೆ ಸೆರೆಸಿಕ್ಕಿದನು. ಇವರಿಬ್ಬರನ್ನೂ ಜೀವಸಹಿತವಾಗಿ
19:20 ಆದಿ. 19:24; ಪ್ರಕ. 14:10; 21:8; 2 ಥೆಸ. 1:8:
ಗಂಧಕದಿಂದ ಉರಿಯುವ
19:20 ಪ್ರಕ. 20:10, 14, 15; ದಾನಿ. 7:11:
ಬೆಂಕಿಯ ಕೆರೆಗೆ ಹಾಕಲಾಯಿತು.

ಉಳಿದವರು ಆ ಕುದುರೆಯ ಮೇಲೆ ಕುಳಿತಿದ್ದಾತನ
19:21 ವ. 15:
ಬಾಯಿಂದ ಬಂದ ಇಬ್ಬಾಯಿ ಕತ್ತಿಯಿಂದ ಹತರಾದರು,
19:21 ವ. 17:
ಪಕ್ಷಿಗಳೆಲ್ಲಾ ಅವರ ಮಾಂಸವನ್ನು ಹೊಟ್ಟೆತುಂಬಾ ತಿಂದವು.

21

Copyright information for KanULB